ಓವರ್ಬರಿ, ಸರ್ ಥಾಮಸ್: 1581-1613. ಆಂಗ್ಲಕವಿ ಮತ್ತು ಪ್ರಬಂಧಕಾರ. ವಾರ್ವಿಕ್ಷೈರಿನ ಕಾಂಪ್ಟನ್ ಸ್ಕಾರ್ಪಿಯನ್ನಲ್ಲಿ ಹುಟ್ಟಿದ. ಆಕ್ಸ್‌ಫರ್ಡ್ನಲ್ಲಿ ವಿದ್ಯಾಭ್ಯಾಸ ಮಾಡಿ ಚರ್ಕವರ್ತಿ ಒಂದನೆಯ ಜೇಮ್ಸನ ಕೃಪಾಪಾತ್ರನಾದ ರಾಬರ್ಟ್ ಕಾರನ ಕಾರ್ಯದರ್ಶಿ ಹಾಗೂ ಆಪ್ತಸಲಹೆಗಾರನಾಗಿ ಕೆಲಸಮಾಡಿದ. ಕ್ರಮೇಣ ಕಾರ್ ಓವರ್ಬರಿಯ ಕೈಗೊಂಬೆಯಾದ. ಓವರ್ಬರಿಯ ಕೈಗೊಂಬೆ ಕಾರ್, ಕಾರ್ನ ಕೈಗೊಂಬೆ ಚಕ್ರವರ್ತಿ - ಎಂಬ ಮಾತು ಜನಜನಿತವಾಯಿತು.

ಕಾರ್ ರಾಚೆಸ್ಟರಿನ ಅರ್ಲ್ ಆದ ಮೇಲೆ ಎಸೆಕ್ಸಳೊಂದಿಗೆ ಪ್ರೇಮ ಬೆಳೆಸಿದ. ಮೊದಲಿಗೆ ಇವರಿಬ್ಬರ ಮದುವೆಯಿಂದ ಪರಸ್ಪರ ವ್ಯಕ್ತಿತ್ವ, ಘನತೆಗಳು ಹೆಚ್ಚುತ್ತವೆಂದು ಭಾವಿಸಿದ ಓವರ್ಬರಿ ಈ ಪ್ರೇಮಪ್ರಕರಣವನ್ನು ಪ್ರೋತ್ಸಾಹಿಸಿದನಾದರೂ ಅನಂತರ ಇವರಿಬ್ಬರ ಒಗ್ಗೂಡಿಕೆಯಿಂದ ಕಾರ್ ಎಸೆಕ್ಸಳ ಕೈಗೊಂಬೆಯಾಗುವನೆಂದೂ ಭಾವಿಸಿದ ಓವರ್ಬರಿ ಇವರ ಪ್ರೇಮಪ್ರಕರಣವನ್ನು ಬಂiÀÄಲಿಗೆಳೆದು ಬಲವಾಗಿ ವಿರೋಧಿಸಿದ. ಅದೇ ಸಮಯದಲ್ಲಿ ಮದುವೆಯಾಗುವ ಯುವಕ ಎಂಥ ಹೆಂಡತಿಯನ್ನು ಬಂiÀÄಸಬೇಕೆಂಬ ವಿಷಯಗಳನ್ನೊಳಗೊಂಡ ಎ ವೈಫ್ ಎಂಬ ಕವನವನ್ನು ರಚಿಸಿದ. ಇದು ಪರೋಕ್ಷವಾಗಿ ಎಸೆಕ್ಸಳ ವ್ಯಂಗ್ಯಚಿತ್ರವಾಗಿತ್ತು. ಇದರಿಂದಾಗಿ ಓವರ್ಬರಿ ಚಕ್ರವರ್ತಿಯ ಅಸಂತುಷ್ಟಿಗೆ ಪಾತ್ರನಾಗಬೇಕಾಯಿತು. ಪರಿಣಾಮವಾಗಿ ರಾಜದ್ರೋಹದ ಆಪಾದನೆಯ ಮೇಲೆ ಓವರ್ಬರಿ ಕಾರಾಗೃಹಕ್ಕೆ ಅಟ್ಟಲಾಯಿತು. ಎಸೆಕ್ಸಳ ಕುತಂತ್ರದಿಂದಾಗಿ ಕಾರಾಗೃಹದ ಅಧಿಕಾರಿಯ ಮೂಲಕ ಓವರ್ಬರಿ ಕೊಲೆಯಾಯಿತು.

ಈ ಪ್ರಕರಣ ನಡೆದ ಒಂದು ವರ್ಷದ ಮೇಲೆ ಸತ್ಯ ಬೆಳಕಿಗೆ ಬಂದು ನ್ಯಾಯ ವಿಚಾರಣೆ ನಡೆಯಿತು. ನ್ಯಾಯಾಲಯ ಎಸೆಕ್ಸ್‌ ಹಾಗೂ ಕಾರ್ ಇಬ್ಬರಿಗೂ ಶಿಕ್ಷೆ ವಿಧಿಸಿತು. ಆದರೆ ದೊರೆಯ ಕೃಪೆಯಿಂದಾಗಿ ಇಬ್ಬರೂ ಬಿಡುಗಡೆಯಾದರು.

ಓವರ್ಬರಿ ಕಾರಾಗೃಹಕ್ಕೆ ಹೋದ ಆನಂತರ ಯಾರ ನೆರವೂ ಇಲ್ಲದೆ ಬರೆಹಗಾರನೆಂದು ಬೆಳಕಿಗೆ ಬಂದ. ಎ ವೈಫ್ ಎಂಬ ಅವನ ಕವನ 1614ರಲ್ಲಿ ಪ್ರಕಟವಾಗಿ ಅದೇ ವರ್ಷ ಅನೇಕ ಮುದ್ರಣಗಳನ್ನು ಕಂಡಿತು. ವ್ಯಕ್ತಿಚಿತ್ರಗಳನ್ನೊಳಗೊಂಡ ಇವನ ಕ್ಯಾರೆಕ್ವರ್ಸ್ ಎಂಬ ಪ್ರಬಂಧಸಂಕಲನವೂ ಈತನಿಗೆ ಕೀರ್ತಿ ತಂದಿತು.      (ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ